Lyrics of 'Haalu jenu ondaada haage' from haalu jenu film
|
|
ಚಿತ್ರ: ಹಾಲು ಜೇನು,
ತಾರಾಗಣ : ಡಾ|| ರಾಜಕುಮಾರ್, ಮಾಧವಿ, ರೂಪಾದೇವಿ, ಶಕ್ತಿ ಪ್ರಸಾದ್, ತೂಗುದೀಪ್ ಶ್ರೀನಿವಾಸ್
ನಿರ್ದೇಶನ : ಸಿಂಗೀತಂ ಶ್ರೀನಿವಾಸ ರಾವ್
ಹಾಡಿರುವವರು ; ನಟಸಾರ್ವಭೌಮ, ಕನ್ನಡದ ಕಣ್ಮಣಿ, ಕೆಂಟುಕಿ ಕರ್ನಲ್,ಗಾನಗಂಧರ್ವ, ರಸಿಕರ ರಾಜ, ಕಲಾಕೌಸ್ತುಭ,ಪದ್ಮಭೂಷಣ, ವರನಟ, ಡಾ||ರಾಜಕುಮಾರ್.
ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ
ನೀ ನಗುತಲಿ ಸುಖವಾಗಿರೆ ಆನಂದದ ಹೊನಲಾಗಿರೆ
ಬಾಳೆ ಸವಿಗಾನ......
ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ ||ಪ||
ಬಿಸಿಲಾಗಲಿ ಮಳೆಯಾಗಲಿ ನೆರಳಾಗಿ ನಾನು ಬರುವೆನು ಜೊತೆಗೆ
ಬಿಸಿಲಾಗಲಿ ಮಳೆಯಾಗಲಿ ನೆರಳಾಗಿ ನಾನು ಬರುವೆನು ಜೊತೆಗೆ
ಸವಿಮಾತಲಿ ಸುಖ ನೀಡುವೆ ಎಂದೆಂದಿಗೂ ಹೀಗೆ
ಹೂವಾಗಲಿ ಈ ಮೊಗವರಳಿ
ಸಂತೋಷದ ಪರಿಮಳ ಚೆಲ್ಲಿ
ಹೂವಾಗಲಿ ಈ ಮೊಗವರಳಿ
ಸಂತೋಷದ ಪರಿಮಳ ಚೆಲ್ಲಿ
ಹಾಯಾಗಿರೂ.....
ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ||ಪ ||
ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
ಇನ್ದೇತಕೆ ಈ ಮೌನವು
ಹೀಗೇಕೆ ನೀನಿರುವೆ
ನೀನೆತಕೆ ಬಾಳುವೆ ಕೊರಗಿ
ನಾನಿಲ್ಲವೇ ಆಸರೆಯಾಗಿ
ಹಾಯಾಗಿರೂ.........
ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ
ನೀ ನಗುತಲಿ ಸುಖವಾಗಿರೆ ಆನಂದದ ಹೊನಲಾಗಿರೆ
ಬಾಳೆ ಸವಿಗಾನ......
ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ..
--ನಾಗರಾಜ ಮಾದೇಗೌಡ
ಕನಕಪುರ
Last edited by Nagaraja_madegowda; 12-24-2007 at 06:39 AM.
|